ಯಾದಗಿರಿ : ಫೆಬ್ರವರಿ 22, (ಕ.ವಾ) : ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಹಾಗೂ ಸ್ವತಂತ್ರ ಮೈಕ್ರೋಫೀನ್ ಪ್ರೆöÊ.ಲಿ ಇವರ ಸಹಯೋಗದೊಂದಿಗೆ ಇದೇ 2025ರ ಫೆಬ್ರವರಿ 25ರ ಮಂಗಳವಾರ ರಂದು ನೇರ ಸಂದರ್ಶನವನ್ನು ಆಯೋಜಿಸಲಾಗಿದೆ ಎಂದು ಉದ್ಯೋಗಾಧಿಕಾರಿ ಬಸವರಾಜ ಅವರು ತಿಳಿಸಿದ್ದಾರೆ.
ಅಂದು ಸಂದರ್ಶನವು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಇರುತ್ತದೆ. ಸ್ವತಂತ್ರ ಮೈಕ್ರೋಫೀನ್ ಪ್ರೆöÊ.ಲಿ ಯಾದಗಿರಿ, ಫೀಲ್ಡ್ ಅಫೀಸರ್ 20 ಹುದ್ದೆಗಳು ಖಾಲಿ ಇದ್ದು, ಅರ್ಹತೆ 10ನೇ ಪಾಸ್ ಅಥವಾ ಮೇಲ್ಪಟ್ಟು, ಯಾದಗಿರಿ, ಶಹಾಪೂರ, ಸೇಡಂ, ಕಲಬುರಗಿ ಉದ್ಯೋಗ ಸ್ಥಳವಾಗಿದೆ. 18 ರಿಂದ 28 ವರ್ಷ ಒಳಗಿರಬೇಕು, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ಹುದ್ದೆಗೆ ಬೈಕ್ ಮತ್ತು ಆ.ಐ. ಕಡ್ಡಾಯ. ಅವಕಾಶ ವಂಚಿತ ನಿರುದ್ಯೋಗಿ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಈ ನೇರ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ದಾಖಲಾತಿಗಳೊಂದಿಗೆ ವ್ಯಕ್ತಿ ಪರಿಚಯ ರಿಸ್ಯೂಮ್, ಬಯೋಡಾಟಾದೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಹಾಗೂ ನೇರ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ನೇರ ಸಂದರ್ಶನ ನಡೆಯುವ ಸ್ಥಳ ಲಕ್ಷಿö್ಮÃ ನಗರ, ಲಕ್ಷಿö್ಮÃ ಮಂದಿರ ಹತ್ತಿರ, ಬಸವೇಶ್ವರ ಕಲ್ಯಾಣ ಮಂಟಪ ಹಿಂದುಗಡೆ ಯಾದಗಿರಿ. ಹೆಚ್ಚಿನ ಮಾಹಿತಿಗಾಗಿ ಚಿತ್ತಾಪೂರು ರೋಡ್ (ಮಿನಿ ವಿಧಾನ ಸೌಧ) ಜಿಲ್ಲಾಡಳಿತ ಭವನ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬಿ-ಬ್ಲಾಕ್ ರೂ.ನಂ.ಬಿ1, ಬಿ2 2ನೇ ಮಹಡಿ ಯಾದಗಿರಿ ದೂ.ಸಂ.08473253718, 8655791227,9448566765ಗೆ ಕಛೇರಿಯ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
