ಪಾಕಿಸ್ತಾನದ ಹಲವು ನಗರಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಕೆಲವೇ ನಿಮಿಷಗಳ ಮೊದಲು ಭಾರತೀಯ ಸೇನೆ ಪಾಕಿಸ್ತಾನದ 3 ಎಡಬ್ಲ್ಯುಎಸಿಎಸ್ ಅನ್ನು ಧ್ವಂಸಗೊಳಿಸಿದೆ. ಪಾಕಿಸ್ತಾನದ ದಾಳಿ ತೀವ್ರಗೊಂಡಿದ್ದು, ಭಾರತ ಪ್ರತೀಕಾರವಾಗಿ ಲಾಹೋರ್ ಮತ್ತು ಸಿಯಾಲ್‌ಕೋಟ್, ಇಸ್ಲಾಮಾಬಾದ್ ಮೇಲೆ ಕೂಡ ದಾಳಿ ನಡೆಸಿದೆ. ನಿನ್ನೆ ರಾತ್ರಿಯಿಂದ ಈಗಿನವರೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ 4 ಬಾರಿ ದಾಳಿ-ಪ್ರತಿದಾಳಿ ನಡೆದಿರುವುದರಿಂದ ಗಡಿಯಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
ನವದೆಹಲಿ, ಮೇ 8: ನಿನ್ನೆ ಎಲ್ಒಸಿಯಲ್ಲಿ ಪಾಕಿಸ್ತಾನದ ಸೇನೆ ದಾಳಿ ನಡೆಸಿ 16 ಜನರನ್ನು ಕೊಂದಿತ್ತು. ಅದಕ್ಕೆ ಪ್ರತಿಯಾಗಿ ಭಾರತ ಪಾಕಿಸ್ತಾನದ ಲಾಹೋರ್ನಲ್ಲಿ (Lahore) ಪಾಕಿಸ್ತಾನದ ವಾಯು ರಕ್ಷಣಾ ಮೂಲಸೌಕರ್ಯದ ಮೇಲೆ ದಾಳಿ ನಡೆಸಿ ನಾಶಪಡಿಸಿತ್ತು. ಹಾಗೇ, ಚೀನಾ ನಿರ್ಮಿತ ಕ್ಷಿಪಣಿಯನ್ನೂ ಹೊಡೆದುರುಳಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಇಂದು ಸಂಜೆ ಪಾಕಿಸ್ತಾನ (Pakistan) ಜಮ್ಮುವಿನಲ್ಲಿ ಡ್ರೋನ್ ದಾಳಿಗೆ ಯತ್ನಿಸಿತ್ತು. ಆದರೆ, ಭಾರತೀಯ ಸೇನೆ 8 ಪಾಕ್ ಡ್ರೋನ್ಗಳನ್ನು ಹೊಡೆದುರುಳಿಸಿತ್ತು. ಪಾಕಿಸ್ತಾನ ಮತ್ತೆ ಮತ್ತೆ ಭಾರತದ ಮೇಲೆ ದಾಳಿ ನಡೆಸಿರುವುದರಿಂದ ತಕ್ಕ ಪಾಠ ಕಲಿಸಲು ಮುಂದಾಗಿರುವ ಭಾರತ ಇದೀಗ ಮತ್ತೆ ಪಾಕಿಸ್ತಾನದೊಳಗೆ ನುಗ್ಗಿದೆ. ಲಾಹೋರ್, ಇಸ್ಲಮಾಬಾದ್ ಸೇರಿದಂತೆ ಹಲವೆಡೆ ವೈಮಾನಿಕ ದಾಳಿ ನಡೆಸಿದೆ.
ಪಾಕಿಸ್ತಾನದ ಡ್ರೋನ್-ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಭಾರತ ಲಾಹೋರ್‌ಗೆ ದಾಳಿ ಮಾಡಿದೆ. ಪಾಕಿಸ್ತಾನವು ಅನೇಕ ಸ್ಥಳಗಳಲ್ಲಿ ಕ್ಷಿಪಣಿಗಳನ್ನು ಹಾರಿಸಿ, AWACS ಅನ್ನು ನಾಶಪಡಿಸಿದ ನಂತರ ಭಾರತ ಲಾಹೋರ್, ಸಿಯಾಲ್‌ಕೋಟ್ ಮೇಲೆ ದಾಳಿ ಮಾಡಿದೆ. ಪಾಕಿಸ್ತಾನದಿಂದ ಜಮ್ಮು ವಾಯುನೆಲೆಯ ಕಡೆಗೆ ದಾಳಿಗಳನ್ನು ಪ್ರಾರಂಭಿಸಿದಾಗ ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚಾಯಿತು. ಎಂಟು ಕ್ಷಿಪಣಿಗಳು ಮತ್ತು ಮೂರು ಡ್ರೋನ್‌ಗಳನ್ನು ಭಾರತದ S-400 ರಕ್ಷಣಾ ವ್ಯವಸ್ಥೆಗಳು ತಡೆಹಿಡಿದಿವೆ.







Users Today : 1
Users Yesterday : 3
Users Last 7 days : 38