ಕಲಬುರಗಿ,21,ಮಾ.25.-ಪಾಂಡಿಚೇರಿ ರಾಜ್ಯದಲ್ಲಿ ನೋಂದಣಿಯಾಗಿ ಕರ್ನಾಟಕ ತೆರಿಗೆ ಕಟ್ಟದೇ ನಗರದಲ್ಲಿ ಸಂಚರಿಸುತ್ತಿರುವ 11 ವಾಹನಗಳನ್ನು ಕಲಬುರಗಿ ಪ್ರಾದೇಶಿಕ ಸಾರಿಗೆ ಕಚೇರಿಯ ಮೋಟಾರು ವಾಹನ ನಿರೀಕ್ಷಕರು ವಶಪಡಿಸಿಕೊಂಡು ಆರ್ಟಿಓ ಡ್ರೆöÊವಿಂಗ್ ಟ್ರಾö್ಯಕ್ನಲ್ಲಿ ನಿಲ್ಲಿಸಿದ್ದು, ಆದ್ದರಿಂದ ಸಂಬAಧಪಟ್ಟ ವಾಹನಗಳ ಮಾಲೀಕರು ಕರ್ನಾಟಕ ರಾಜ್ಯದ ತೆರಿಗೆ ಭರಿಸಿ, ವಿಳಾಸ ಬದಲಾವಣೆ ಹಾಗೂ ವಾಹನಕ್ಕೆ ಕರ್ನಾಟಕ ನೋಂದಣಿ ಸಂಖ್ಯೆ ಪಡೆದುಕೊಳ್ಳಬೇಕೆಂದು ಕಲಬುರಗಿ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಪಾಂಡಿಚೇರಿ ರಾಜ್ಯದಲ್ಲಿ ನೋಂದಣಿ ಮಾಡಿಕೊಂಡ ವಾಹನಗಳ ಮಾಲೀಕರು ಆರ್ಟಿಓ ಪಾಂಡಿಚೇರಿಯಿAದ ಎನ್ಓಸಿ ಪಡೆದು ಕಲಬುರಗಿ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ತಮ್ಮ ವಾಹನಗಳ ತೆರಿಗೆ ಭರಿಸಿ ಕರ್ನಾಟಕ ನೋಂದಣಿ ಸಂಖ್ಯೆ ಪಡೆದುಕೊಳ್ಳಬೇಕು. ಇನ್ನು ಮುಂದೆ ಕರ್ನಾಟಕ ನೋಂದಣಿ ಸಂಖ್ಯೆ ಪಡೆದುಕೊಳ್ಳದೇ ಮತ್ತು ಕರ್ನಾಟಕ ರಾಜ್ಯ ತೆರಿಗೆ ಭರಿಸದೇ ರಸ್ತೆಯ ಮೇಲೆ ವಾಹನಗಳು ಸಂಚರಿಸುತ್ತಿರುವುದು ಕಂಡು ಬಂದಲ್ಲಿ ವಶಪಡಿಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
