ಬೀದರ ಮೇ.23:- ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣದ ಸಂಬoಧಕಸಿದoತೆ ಬೇಡ ಜಂಗಮ ಜಾತಿ ಮತ್ತು ಮಾದಿಗ ಜಾತಿಯವರು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿರುವ ಕುರಿತು ಈಗಾಗಲೇ ಸರ್ಕಾರಕ್ಕೆ ಪತ್ರ ವ್ಯವಹರಿಸಲಾಗಿದೆ ಹಾಗೂ ವಲಸೆ ಹೋಗಿರುವ ಪರಿಶಿಷ್ಟ ಜಾತಿ ಕುಟುಂಬದವರು ಸ್ವಯಂ ದೃಢೀಕರಣದ ಮೂಲಕ ಅಥವಾ ವಿಶೇಷ ಶಿಬಿರಗಳನ್ನು ನಡೆಸುವ ದಿನಾಂಕಗಳAದು ತಮ್ಮ ಸಮೀಕ್ಷೆಯನ್ನು ಮಾಡಿಕೊಳ್ಳಬಹುದು. ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣದ ಸಮೀಕ್ಷೆ ಕುರಿತು ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಳಿದಂತೆ, ಮಾಳೆಗಾಂವ್, ಮನ್ನಳ್ಳಿ, ಆಣದೂರ, ಮೈಲೂರು, ಮುಸ್ತರಿ, ದಾಬಕ, ಸಮೀಕ್ಷೆ ನಡೆಯುತ್ತಿಲ್ಲ ಎನ್ನುವ ಮನವಿ ಮೇರೆಗೆ, ಉಪ ನಿರ್ದೇಶರು, ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆಯವರು ಕ್ಷೇತ್ರ ಭೇಟಿ ನೀಡಬೇಕು. ಇನ್ನೂಳಿದ ಉಳಿದ ಎರಡು ದಿನಗಳಲ್ಲಿ ಮನೆ ಮನೆ ಸಮೀಕ್ಷೆ ಕೊನೆಗೊಳ್ಳಲಿದ್ದು ಮತಗಟ್ಟೆವಾರು ವಿಶೇಷ ಶಿಬಿರ ಹಾಗೂ ಸ್ವಯಂ ದೃಢೀಕರಣದ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರು, ಮುಖಂಡರುಗಳಾದ ರಾಜು ಕರಡ್ಯಾಳ, ಮಾರುತಿ ಬೌದ್ಧೆ, ಅನಿಲಕುಮಾರ ಬೆಲ್ದಾರ, ಕಮಲಾಕರ ಹೆಗ್ಡೆ , ಪ್ರದೀಪ ಹೆಗ್ಡೆ, ಬಾಬು ಪಾಸ್ವಾನ್, ಶ್ರೀಪತರಾವ್ ದೀನೆ, ರಮೇಶ್ ಕಟ್ಟಿತುಗಾಂವ್, ಶರಣು ಫುಲೆ ಮಹೇಶ ಗೊರನಳ್ಳಿಕರ್, ಅವಿನಾಶ್ ದೀನೆ, ಭಗತ್ ಸಿಂಧೆ, ಪ್ರದೀಪ ಜಂಝೀರೆ, ಸಂಜು ಕುಮಾರ್, ವಿಶಾಲ್ ದೊಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
