ಯಾದಗಿರಿ : ಮಾರ್ಚ್ 01, : ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ವತಿಯಿಂದ ಇದೇ 2025ರ ಮಾರ್ಚ್ 4ರ ಮಂಗಳವಾರ ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ ಎಂದು ಉದ್ಯೋಗಾಧಿಕಾರಿ ಬಸವರಾಜ ಅವರು ತಿಳಿಸಿದ್ದಾರೆ.
ಮುತ್ತೂಟ್ ಫೈನಾನ್ಸ್, (ಅ) ಸೇಲ್ಸ್ ಟ್ರೆöÊನಿ 10 ಹುದ್ದೆಗಳು ಖಾಲಿ ಇದ್ದು, ಹುದ್ದೆಗೆ ಅರ್ಹತೆ ಯಾವುದೇ ಪದವಿ, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದು. 18 ರಿಂದ 28 ವರ್ಷ ಒಳಗಿರಬೇಕು, (ಆ) ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ 02 ಹುದ್ದೆಗಳು ಖಾಲಿ ಇದ್ದು, ಹುದ್ದೆಗೆ ಅರ್ಹತೆ ಯಾವುದೇ ಪದವಿ ಮಹಿಳಾ ಅಭ್ಯರ್ಥಿಗಳು ಮಾತ್ರ ಭಾಗವಹಿಸಬೇಕು, 18 ರಿಂದ 26 ವರ್ಷ ಒಳಗಿರಬೇಕು, ಯಾದಗಿರಿ ರಾಯಚೂರು ಉದ್ಯೋಗ ಸ್ಥಳವಾಗಿದೆ. ಬೆಂಗಳೂರು ಟೀಮ್ ಎಚ್ ಆರ್ ಸೋಲುಷನ್ಸ್ ಪ್ರೆöÊ.ಲಿ. ಅಪರೇಷನ್ಸ್, ಚೀಫ್ ಸಿಪ್ಟಿಂಗ್, ಕ್ವಾಲಿಟಿ ಚೆಂಕಿAಗ್, ಪಿಕಿಂಗ್, ಪ್ಯಾಕಿಂಗ್, ಸ್ಕಾನಿಂಗ್ 500 ಹುದ್ದೆಗಳು ಖಾಲಿ ಇದ್ದು, ಹುದ್ದೆಗೆ ಅರ್ಹತೆ ಎಸ್.ಎಸ್.ಎಲ್.ಸಿ, ಪಿಯುಸಿ, ಯಾವುದೇ ಪದವಿ, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಮಾತ್ರ ಭಾಗವಹಿಸಬಹುದು. ವಯೋಮಿತಿ 18 ರಿಂದ 30 ವರ್ಷ ಒಳಗಿರಬೇಕು, ಬೆಂಗಳೂರು ಉದ್ಯೋಗ ಸ್ಥಳವಾಗಿದೆ. (ಮಹಿಳೆಯರಿಗೆ ಮಾತ್ರ ಉಚಿತ ಊಟ, ವಸತಿ, ಹಾಗೂ ಕ್ಯಾಬ್ ಸೌಲಭ್ಯವಿದೆ). ಅವಕಾಶ ವಂಚಿತ ನಿರುದ್ಯೋಗಿ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಈ ನೇರ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ದಾಖಲಾತಿಗಳೊಂದಿಗೆ ವ್ಯಕ್ತಿ ಪರಿಚಯ ರಿಸ್ಯೂಮ್, ಬಯೋಡಾಟಾದೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಲು ಹಾಗೂ ನೇರ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ನೇರ ಸಂದರ್ಶನ ನಡೆಯುವ ಸ್ಥಳ, ಹೆಚ್ಚಿನ ಮಾಹಿತಿಗಾಗಿ ಚಿತ್ತಾಪೂರು ರೋಡ್ (ಮಿನಿ ವಿಧಾನ ಸೌಧ) ಜಿಲ್ಲಾಡಳಿತ ಭವನ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬಿ-ಬ್ಲಾಕ್ ರೂ. ನಂ. ಬಿ1, ಬಿ2 2ನೇ ಮಹಡಿ ಯಾದಗಿರಿ ದೂ.ಸಂ.08473253718, ಮೊ.ನಂ.9448566765ಗೆ ಕಛೇರಿಯ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
