August 4, 2025 4:49 am

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ಕಲಬುರಗಿ » ನೆರೆಹಾವಳಿ, ಪ್ರವಾಹ ಎದುರಾದರೆ ತುರ್ತಾಗಿ ಪರಿಹಾರ ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ.

ನೆರೆಹಾವಳಿ, ಪ್ರವಾಹ ಎದುರಾದರೆ ತುರ್ತಾಗಿ ಪರಿಹಾರ ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ.

ಕಲಬುರಗಿ: ಮೇ. 23: ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದಾಗ ನೆರೆಹಾವಳಿ, ಪ್ರವಾಹ,ಹಾಗೂ ಮನೆಹಾನಿಯಾದ ಸಂದರ್ಭದಲ್ಲಿ ಅಧಿಕಾರಿಗಳು ತುರ್ತಾಗಿ ಪರಿಹಾರ ನೀಡಲು ಸಂಬAಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಹೇಳಿದರು.

        ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯಲ್ಲಿ 2025-26 ನೇ ಸಾಲಿನ ಪೂರ್ವ/ಮುಂಗಾರು ಮಳೆ ಅವಧಿಯ ಪೂರ್ವ ಸಿದ್ಧತೆ ಹಾಗೂ ಮುಂಜಾಗ್ರತೆ ಕ್ರಮಗಳು ಕೈಗೊಳ್ಳುವ ಬಗ್ಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

       ಪ್ರಕೃತಿ ವಿಕೋಪಗಳು ಸಂಭಾವಿಸಿದ್ದ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್ ನವರು ತ್ವರಿತವಾಗಿ ಸಾರ್ವಜನಿಕ ರಕ್ಷಣೆಗಾಗಿ ಧಾವಿಸಬೇಕು ಎಂದರು.

         ಭೀಮಾನದಿಯ ಉಜಯನಿ ಡ್ಯಾಂ ನಿಂದ ನೀರು ಬಿಟ್ಟಾಗಿ ಹೆಚ್ಚಿನ ಪ್ರಮಾಣ ಒಳಹರಿವು ಉಂಟಾಗುತ್ತದೆ ಅಧಿಕಾರಿಗಳು ಎಚ್ಚತ್ತುಗೊಂಡು ಕೆಲಸ ನಿರ್ವಹಿಸಬೇಕು ಪ್ರತಿದಿನ ನೀರಿನ ಪ್ರಮಾಣವನ್ನು ಚಕ್ ಮಾಡಿ ಏನೆ ತೊಂದರೆಗಳು ಇದ್ದರೆ ಅದನ್ನು ಸರಿಪಡಿಸಲು ಸೂಚನೆ ನೀಡಿದರು.

153 ಹಳ್ಳಿಗಳಿಗೆ ಸಮಸ್ಯೆಯಾಗುವ ಸಂಭವ ಇರುತ್ತದೆ ಇದಕ್ಕಾಗಿ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ತುರ್ತು ಅಗತ್ಯ ಸೇವೆಗಳ ಮಾಹಿತಿ ನೀಡಲು ಸಹಾಯವಾಣಿ ಸಂಖ್ಯೆಯನ್ನು ಪ್ರತಿಯೊಂದು ಗ್ರಾಮ ಪಂಚಾಯತಿಗೆ ನೀಡಬೇಕೆಂದು ಹೇಳಿದರು.

  ಜಾಕ್‌ವೆಲ್‌ಗಳನ್ನು ಪರಿಶೀಲಿಸಬೇಕು ಹಾಗೂ ನೀರಿನ ಏರು ಇಳಿತವನ್ನು ಪರೀಕ್ಷೆ ಮಾಡಬೇಕು ಯಾವುದೇ ಸಾರ್ವಜನಿಕರಿಗೆ ಹಾನಿಯಾಗದಂತೆ ಕ್ರಮಕೈಗೊಳ್ಳಲು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.


      ಮಳೆಗಾಲ ಕಾರಣದಿಂದ ಭೀಮಾನದಿಯ ಒಳಹರಿವಿನ ಹೆಚ್ಚಳವಿರುವ ಕಾರಣದಿಂದ ಯಾವುದೇ ಅನಾಹುತ ಸಂಭವಿಸಿದAತೆ ತಾಲೂಕಕ್ಕೆ ಒಬ್ಬ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಮತ್ತು ನಾಲ್ಕು ದಿನಗಳಲ್ಲಿ ತಾಲೂಕು ಟಾಸ್ಕಪೋರ್ಸ ಸಭೆಯನ್ನು ಮಾಡಿ ಮುಂದೆ ಸಂಭವಿಸಬಹುದಾದ ಅನಾಹುತಗಳ ಮುಂಜಾಗೃತ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿಯನ್ನು ನೀಡಬೇಕೆಂದರು

ಮಳೆಗಾಲದಲ್ಲಿ  ನದಿ ತಟದಲ್ಲಿರುವ ಗ್ರಾಮಗಳಿಗೆ ವಿಶೇಷ  ಗಮನಹರಿಸಬೇಕು ಸಾರ್ವಜನಿಕರಿಗೆ ಅರಿವು ಮೂಡಿಸಲು ಡಂಗುರ ಹಾಗೂ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡಬೇಕು. ನೀರಿನ ಅಭಾವ ಆಗದಂತೆ ನೋಡಿಕೊಳ್ಳಬೇಕು ಎಂದರು.

ವಿಶೇಷವಾಗಿ ಮಳೆಗಾಲದಲ್ಲಿ ನೀರು ಕಲುಷಿತಗೊಳ್ಳುವುದರಿಂದ ಹಲವಾರು ಸಾಂಕ್ರಾಮಿಕ ರೋಗಗಳಾದ ಟೈಫಡ್, ಮಲೇರಿಯಾ ಡೆಂಗ್ಯೂ ಪ್ರಕರಣಗಳು ಹೆಚ್ಚಿನ ಸಂಕ್ರಾಮಿಕ ರೋಗಗಳು ಹರಡುವ ಸಂಭವಿರುವ ಕಾರಣದಿಂದ ಆರೋಗ್ಯ ಇಲಾಖೆ ಹೆಚ್ಚಿನ ಗಮನ ಹರಿಸಿ ಕ್ರಮಕೈಗೊಳ್ಳಬೇಕು. ಎಂದು ಜಿಲ್ಲಾ ಅರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಖ್ಯಾತನಾಳ ಅವರಿಗೆ ಸೂಚನೆ ನೀಡಿದರು.

      ಡೆಂಗ್ಯೂ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ರೋಗಿಗಳಿಗೆ ಸಮಯಕ್ಕೆ ಸರಿಯಾದ ಚಿಕ್ಸಿತೆ ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್‌ಗಳು ಕಾಯ್ದಿರಿಸಬೇಕು ಸಕಾಲಕ್ಕೆ ಚಿಕಿತ್ಸೆ ನೀಡಲು ಸೂಚಿಸಿದರು.
ರೈತರಿಗೆ ಮಳೆಗಾಲವಿರುವ ಕಾರಣದಿಂದ ಕೃಷಿ ಚಟುವಟಿಕೆ ಅಗತ್ಯವಿರುವ ಕಾರಣದಿಂದ ಬಿತ್ತನೆ ಬೇಕಾದ ಬೀಜ ರಸಗೊಬ್ಬರಗಳು ಕೃಷಿ ಉಪಕರಣಗಳು ಮತ್ತು ಕೀಟನಾಶಕಗಳನ್ನು ಪರಿಶೀಲಿಸಿ ಕ್ರಮಕೈಗೊಂಡು ರೈತರಿಗೆ ಸುಲಭ ದರದಲ್ಲಿ ಸಿಗುವಂತೆ ನೀಡಬೇಕೆಂದರು.

ಕಲಬುರಗಿ ಕೆಲವೊಂದು ವಾರ್ಡಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ವ್ಯತ್ಯಯ ಸಂಭವಿಸುತ್ತಿದ್ದು, ಸಾರ್ವಜನಿಕ ಸಹಾಯವಾಣಿಗೆ ಕಂಟ್ರೋಲ್ ರೂಂ ಸ್ಥಾಪಿಸಿ ಸಂಬoಧಪಟ್ಟ ಅಧಿಕಾರಿಗಳು ಸಾರ್ವಜನಿಕರು ಸಹಾಯವಾಣಿಯ ಸಂಖ್ಯೆಯನ್ನು ನೀಡಿ ಸಾರ್ವಜನಿಕರ ಸಮಸ್ಯಗಳಿಗೆ ತಕ್ಷಣವಾಗಿ ಸ್ಪಂಧಿಸಬೇಕು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

       ಜೂನ್ ತಿಂಗಳಲ್ಲಿ ಶಾಲಾ ಕಾಲೇಜುಗಳು ಆರಂಭವಾಗುವುದರಿoದ ಹೆಚ್ಚಿನ ಮಳೆಯಾಗುವ ಸಂಭವ ಇರುವುದರಿಂದ ಇಲ್ಲವಾದಲ್ಲಿ ಪರ್ಯಾಯ ವ್ಯವಸ್ಥೆ ಮಾಡುವ ಮುಖಾಂತರ ಸಂಭವಿಸುವ ಅನಾಹುತಗಳನ್ನು ತಪ್ಪಿಸಬೇಕು. ಶಾಲಾ ಕಾಲೇಜ್ ಮೇಲ್ಚಾವಣೆ ಮತ್ತು ಅಂಗನವಾಡಿ ಕಟ್ಟಡಗಳ ಮೇಲ್ಚಾವಣೆ ಕುಸಿಯುವ ಸಂಭವ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸದoತೆ ಮುಂಜಾಗ್ರತೆ ಕ್ರಮವಾಗಿ ಕಟ್ಟಡಗಳ ಸ್ಥಳಾಂತರ ಮಾಡಲು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶ ಸೂರ್ಯಕಾಂತ ಮದಾನೆ ಅವರಿಗೆ ಸೂಚನೆ ನೀಡಿದರು.

   ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ ಅವರನ್ನು ಶಾಲೆ ಕರೆತರಲು ಬಾಲಕಾರ್ಮಿಕ ಅಧಿಕಾರಿಯನ್ನು ಸೂಚನೆ ನೀಡಿದರು. ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳಿಗೆ ಶಿಕ್ಷಣದ ಅರಿವನ್ನು ಮೂಡಿಸುವುದರ ಮುಖಾಂತರ ಶಾಲೆಗೆ ಬರುವಂತೆ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದುಹೇಳಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಮಹೇಶ ಮೇಗಣ್ಣನವರ್ ಮತ್ತು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್, ಡಿಯುಡಿಸಿ ಯೋಜನಾ ನಿರ್ದೇಶಕ ಮುನ್ವಾರ ದೌಲಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ ಇನಾಂದಾರ, ಡಿ.ಹೆಚ್.ಓ. ಡಾ. ಶರಣಬಸಪ್ಪ ಖ್ಯಾತನಾಳ, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಗಳು ಉಪಸ್ಥಿತರಿದ್ದರು.

 

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price