June 17, 2025 11:19 pm

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ಶಿಕ್ಷಣ » ದ್ವಿತೀಯ ಪಿ.ಯು.ಸಿ ಪರೀಕ್ಷಾ ಕೇಂದ್ರಕ್ಕೆ ಡಿ.ಸಿ.ಭೇಟಿ

ದ್ವಿತೀಯ ಪಿ.ಯು.ಸಿ ಪರೀಕ್ಷಾ ಕೇಂದ್ರಕ್ಕೆ ಡಿ.ಸಿ.ಭೇಟಿ

ಕಲಬುರಗಿ,04ಮಾ.25.  ಪ್ರಸಕ್ತ 2024-25ನೇ ಶೈಕ್ಷಣಿಕ ವ³Àðದ ದ್ವಿತೀಯ ಪಿ.ಯು.ಸಿ. ಪರೀಕ್ಷೆ-1 ಆರಂಭಗೊAಡಿದ್ದು, ಸೋಮವಾರ ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದ ಎಂ.ಪಿ.ಎಚ್.ಎಸ್ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಕೇಂದ್ರದ ಪ್ರತಿ ಕೋಣೆಗೆ ಭೇಟಿ ನೀಡಿದ ಅವರು, ಯಾವುದೇ ರೀತಿಯಲ್ಲಿ ನಕಲಿಗೆ ಇಲ್ಲಿ ಅವಕಾಶ ನೀಡಬಾರದು. ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು, ಕಡ್ಡಾಯಾಗಿ ಪ್ರಿಸ್ಕಿಂಗ್ ಮಾಡಬೇಕೆಂದು ಕೊಠಡಿ ಮೇಲ್ವಿಚಾರಕರಿಗೆ ಸೂಚಿಸಿದರು.

ನಂತರ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳ ಮೇಲೆ ಇದೇ ಪ್ರಥಮ ಬಾರಿಗೆ ವೆಬ್ ಕಾಸ್ಟಿಂಗ್ ಮೂಲಕ ನಿಗಾ ಇಡಲು ಸ್ಥಾಪಿಸಿರುವ ಮಾನಿಟರ್ ರೂಂಗೆ ಭೇಟಿ ನೀಡಿದ ಡಿ.ಸಿ. ಅವರು, ಅಲ್ಲಿನ ಸಿಬ್ಬಂದಿಯಿAದ ಕೇಂದ್ರದ ಕಾರ್ಯವೈಖರಿ ಕುರಿತು ಮಾಹಿತಿ ಪಡೆದರು. 51 ಪರೀಕ್ಷಾ ಕೇಂದ್ರಗಳ 765 ಕೊಠಡಿಯಲ್ಲಿ 1,284 ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿದ್ದು, ಮಾನಿಟರ್ ರೂಂ ನಿಂದಲೇ ಪ್ರತಿ ಕೇಂದ್ರದ ಪರೀಕ್ಷಾ ಕೋಣೆಗಳನ್ನು ನೇರವಾಗಿ ವೀಕ್ಷಿಸಬಹುದಾಗಿದೆ ಎಂದು ಸಿಬ್ಬಂದಿಗಳು ತಿಳಿಸಿದರು.

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price