June 17, 2025 8:29 am

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ದೇಶ » ಟ್ರಂಪ್ ರೆಸಿಪ್ರೋಕಲ್ ಟ್ಯಾಕ್ಸ್ ಹೊಡೆತಕ್ಕೆ ಅಮೆರಿಕ ಮಾರುಕಟ್ಟೆಯಲ್ಲಿ ಬಿರುಗಾಳಿ

ಟ್ರಂಪ್ ರೆಸಿಪ್ರೋಕಲ್ ಟ್ಯಾಕ್ಸ್ ಹೊಡೆತಕ್ಕೆ ಅಮೆರಿಕ ಮಾರುಕಟ್ಟೆಯಲ್ಲಿ ಬಿರುಗಾಳಿ

ಟ್ರಂಪ್ ರೆಸಿಪ್ರೋಕಲ್ ಟ್ಯಾಕ್ಸ್ ಹೊಡೆತಕ್ಕೆ ಅಮೆರಿಕ ಮಾರುಕಟ್ಟೆಯಲ್ಲಿ ಬಿರುಗಾಳಿ ಎದ್ದಿದ್ದರೆ, ಇದನ್ನೇ ಫಾಲೋ ಮಾಡಿದ ಎಲ್ಲ ಮಾರುಕಟ್ಟೆಗಳು ಇಂದು ಭಾರಿ ಕುಸಿತದೊಂದಿಗೆ ವ್ಯವಹಾರ ಮುಗಿಸಿವೆ.

ಇನ್ನು ದೇಶೀಯ ಷೇರು ಮಾರುಕಟ್ಟೆಗಳು ಶುಕ್ರವಾರ ಭಾರಿ ನಷ್ಟದೊಂದಿಗೆ ಕೊನೆಗೊಂಡವು. ಇದಕ್ಕೆ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ಬರುತ್ತಿರುವ ನಕಾರಾತ್ಮಕ ಸಂಕೇತಗಳು ಮತ್ತು ವಿದೇಶಿ ಹೂಡಿಕೆಗಳ ಕುಂಠಿತದಿಂದ ಮಾರುಕಟ್ಟೆಗಳು ನಷ್ಟದಲ್ಲಿ ಕೊನೆಗೊಂಡಿವೆ.

ವಿಶೇಷವಾಗಿ ಕಚ್ಚಾ ತೈಲ ಬೆಲೆಯಲ್ಲಿನ ಹೊಯ್ದಾಟದಿಂದಾಗಿ ರಿಲಯನ್ಸ್, ಲಾರೆನ್ಸ್ ಮತ್ತು ಟೂಬ್ರೊ ಮತ್ತು ಇನ್ಫೋಸಿಸ್‌ನಂತಹ ಹೆವಿವೇಯ್ಟ್‌ ಷೇರುಗಳು ಭಾರಿ ನಷ್ಟ ಅನುಭವಿಸಿವೆ. ಇವು ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ಕುಸಿತ ಅನುಭವಿಸಲು ಕಾರಣವಾಗಿವೆ.

ಅಂತಿಮವಾಗಿ ಶುಕ್ರವಾರ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 930 ಅಂಕ ಕಳೆದುಕೊಂಡು 75,364ಕ್ಕೆ ಸ್ಥಿರವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಕೂಡಾ 345 ಅಂಕ ಕಳೆದುಕೊಂಡು 22,904ಕ್ಕೆ ಇಳಿಕೆ ಕಂಡಿದೆ.

ಹಿಂಜರಿಕೆ ಮಧ್ಯ ಲಾಭ ಮಾಡಿಕೊಂಡ ಷೇರುಗಳಿವು: ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ನೆಸ್ಲೆ ಇಂಡಿಯಾ, ಐಸಿಐಸಿಐ ಬ್ಯಾಂಕ್, ಐಟಿಸಿ, ಏಷ್ಯನ್ ಪೇಂಟ್ಸ್, ಆಕ್ಸಿಸ್ ಬ್ಯಾಂಕ್

ಟ್ರಂಪ್​ ಹೊಡೆತಕ್ಕೆ ನಷ್ಟ ಅನುಭವಿಸಿದವರು: ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಎಲ್ & ಟಿ, ಅದಾನಿ ಪೋರ್ಟ್ಸ್, ಇಂಡಸ್‌ಇಂಡ್ ಬ್ಯಾಂಕ್, ಟೆಕ್ ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್, ಸನ್‌ಫಾರ್ಮಾ, ಎಚ್‌ಸಿಎಲ್ ಟೆಕ್ನಾಲಜೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇನ್ಫೋಸಿಸ್, ಎನ್‌ಟಿಪಿಸಿ ಷೇರುಗಳಲ್ಲಿ ಇಂದು ಭಾರಿ ಪ್ರಮಾಣದ ಮಾರಾಟ ಕಂಡು ಬಂದಿತು.

ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಸ್ಥಿತಿ ಗತಿ:ಏಷ್ಯಾದ ಮಾರುಕಟ್ಟೆಗಳಲ್ಲಿ ಪ್ರಮುಖವಾದ ಟೋಕಿಯೊ ಮತ್ತು ಸಿಯೋಲ್ ಮಾರುಕಟ್ಟೆಗಳು ನಷ್ಟದೊಂದಿಗೆ ಕೊನೆಗೊಂಡವು. ಹಾಂಕಾಂಗ್ ಮತ್ತು ಶಾಂಘೈ ಮಾರುಕಟ್ಟೆಗಳಿಗೆ ಇಂದು ರಜೆ. ಪ್ರಸ್ತುತ ಯುರೋಪಿಯನ್ ಮಾರುಕಟ್ಟೆಗಳು ನಷ್ಟದೊಂದಿಗೆ ವಹಿವಾಟು ನಡೆಸುತ್ತಿವೆ. ಗುರುವಾರ ಅಮೆರಿಕದ ಮಾರುಕಟ್ಟೆಗಳು ನಷ್ಟದೊಂದಿಗೆ ಅಂತ್ಯಗೊಂಡಿದ್ದು ಗೊತ್ತೇ ಇದೆ. 2020ರ ನಂತರ ಅಮೆರಿಕದ ಮಾರುಕಟ್ಟೆಗಳು ಇಷ್ಟೊಂದು ದೊಡ್ಡ ಮಟ್ಟದ ನಷ್ಟ ಅನುಭವಿಸುತ್ತಿರುವುದು ಇದೇ ಮೊದಲು.

ರೂಪಾಯಿ ಮೌಲ್ಯ:ಇಂದು ರೂಪಾಯಿ ಮೌಲ್ಯ 5 ಪೈಸೆ ಹೆಚ್ಚಾಗಿದೆ. ಪ್ರಸ್ತುತ, ರೂಪಾಯಿಯ ವಿನಿಮಯ ದರವು ಯುಎಸ್ ಡಾಲರ್ ಎದುರು ರೂ.85.28 ಆಗಿದೆ.

ಕಚ್ಚಾ ತೈಲ ಬೆಲೆಗಳು:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇ.3.26ರಷ್ಟು ಇಳಿಕೆಯಾಗಿದೆ. ಪ್ರಸ್ತುತ, ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 67.85 ಡಾಲರ್ ಆಗಿದೆ.

ವಿದೇಶಿ ಹೂಡಿಕೆಗಳು:ಸ್ಟಾಕ್ ಎಕ್ಸ್ಚೇಂಜ್ ಡೇಟಾ ಪ್ರಕಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಗುರುವಾರ 2,806 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅದೇ ಸಮಯದಲ್ಲಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು (DIIs) 221.47 ಕೋಟಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಖರೀದಿಸಿದರು

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price