ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸಲು ಜಾಗೃತಿ ಅಭಿಯಾನ : ಸಿಇಒ ಲವೀಶ್ ಒರಡಿಯಾ*
ಜಲಮೂಲಗಳನ್ನು ಪ್ಲಾಸ್ಟಿಕ್ ಮಾಲಿನ್ಯದಿಂದ ತಡೆಗಟ್ಟುವುದು|
ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ , ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಪ್ರೇರೆಣೆ.
ಬಳಕೆಯಾದ ಪ್ಲಾಸ್ಟಿಕ್ ವಸ್ತುಗಳನ್ನು ಸೂಕ್ತ ವಿಲೇವಾರಿ ಮಾಡಿ
ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. “ಜಾಗತಿಕವಾಗಿ ಪ್ರಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು” (Ending Plastic Pollution Globally) ಎಂಬ ಘೋಷ ವಾಕ್ಯದೊಂದಿಗೆ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವ ಮಹತ್ವವನ್ನು ತಿಳಿಸುವ ಉದ್ದೇಶದೊಂದಿಗೆ ಮೇ 22 ರಿಂದ ಜೂನ್ 5, 2025 ರವರೆಗೆ ಪೂರ್ವ ಅಭಿಯಾನವನ್ನು ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲವೀಶ್ ಒರಡಿಯಾ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯು ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ಘನ ತ್ಯಾಜ್ಯ ನಿರ್ವಹಣಾ ಪ್ರಯತ್ನಗಳ ಪ್ರಮುಖ ಭಾಗವಾಗಿದ್ದು ಈ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜೂನ್ 05 ರ ವರೆಗೆ ಜಾಗೃತಿ ಅಭಿಯಾನದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಆಗುವ ದುಷ್ಪರಿಣಾಮಗಳು ಹಾಗೂ ಇದರ ನಿರ್ಮೂಲನೆ ಮಾಡುವ ಸಂಬಂಧ ವಿವಿಧ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮ/ಚಟುವಟಿಕೆ ಶ್ರಮದಾನ, ಸಂವಾದ ಸಭೆಗಳನ್ನು ಆಯೋಜನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ.
ಈ ಅಭಿಯಾನದಲ್ಲಿ ವಿಶೇಷವಾಗಿ
*ಜಲಮೂಲಗಳ ಸುತ್ತು- ಮುತ್ತ ಸ್ವಚ್ಚಗೊಳಿಸುವುದು*
*ಗ್ರಾಮದಲ್ಲಿ ಬ್ಲಾಕ್ ಸ್ಪಾಟ್ ( ಕಸ ಎಸೆಯುವ ಸ್ಥಳ) ಗುರುತಿಸಿ ಸ್ವಚ್ಚಗೊಳಿಸುವುದು*
*ಚರಂಡಿ ಸ್ವಚ್ಛಗೊಳಿಸುವುದು, ಅದರಲ್ಲಿ ಪ್ಲಾಸ್ಟಿಕ್ & ಇತರೆ ವಸ್ತುಗಳನ್ನು ಎಸೆಯದಂತೆ ತಿಳಿಸುವುದು*
*ಏಕ ಬಳಕೆಯ ಪ್ಲಾಸ್ಟಿಕ್ ವಸ್ತು, ಕವರ್,ಗಳನ್ನು ಉತ್ಪಾದಿಸುವ, ಮಾರಾಟ ಮಾಡುವ, ಗ್ರಾಹಕರಿಗೆ ನೀಡುವ ಅಂಗಡಿ ಹೊಟೇಲ್, ಬೇಕರಿ, ಇತರೆ ವಾಣಿಜ್ಯಮಳಿಗೆಗಳಿಗೆ ತಪಾಸಣೆ ಮಾಡುವುದು*
ಬಳಕೆಯಾದ ಪ್ಲಾಸ್ಟಿಕ್ ವಸ್ತುಗಳನ್ನು ಸೂಕ್ತ ವಿಲೇವಾರಿ ಮಾಡುವುಂತೆ ಪ್ರೇರೆಣೆ
ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆಯ ಮಾಡಿ ವಿಂಗಡಿಸಿ ವೈಜ್ಞಾನಿಕ ವಿಲೇವಾರಿ ಮಾಡುವುದಾಗಿದೆ ಎಂದು ಹೇಳಿದರು.
ಅಭಿಯಾನದಲ್ಲಿ *ಗ್ರಾಮ ಪಂಚಾಯತಿಯ ಚುನಾಯಿತ ಪ್ರತಿನಿದಿಗಳು, ಯುವಕರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು ಮತ್ತು ಸ್ವಯಂ ಸೇವಕರು, ಗ್ರಾಮದ ಮುಖಂಡರು ಅಭಿಯಾನದಲ್ಲಿ ಭಾಗವಹಿಸಿ *ಪ್ಲಾಸ್ಟಿಕ್ ಮುಕ್ತ ಗ್ರಾಮಗಳನ್ನಾಗಿ*
ರೂಪಿಸಲು ಸಹಕರಿಸಲು ಮನವಿ ಮಾಡಿದರು.
