ಯಾದಗಿರಿ : 05 ಮಾರ್ಚ್ 25,: ಗ್ರಾಮ ಒನ್ ಕೇಂದ್ರಗಳು ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯ ವರೆಗೆ ಕಾರ್ಯನಿರ್ವಹಿಸಲಿವೆ ಈ ಯೋಜನೆಯನ್ನು ಈಗಾಗಲೇ ಅನುಷ್ಠಾನಗೊಳಿಸಿದ್ದು, ಸದ್ಯ ಸ್ಥಾಪನೆಗಾಗಿ ಬಾಕಿ ಇರುವ ಗ್ರಾಮ ಒನ್ ಕೇಂದ್ರಗಳಿಗೆ ಕಲಬುರಗಿ ವಿಭಾಗದ ಪಾಲುದಾರಿಕೆ ಸಂಸ್ಥೆವತಿಯಿAದ 2025ರ ಮಾರ್ಚ್ 1 ರಿಂದ 15ರ ವರೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಅಪರ ಜಿಲ್ಲಾಧಿಕಾರಿ ಶ್ರೀ ಶರಣಬಸಪ್ಪ ಕೋಟೆಪ್ಪಗೊಳ ಅವರು ತಿಳಿಸಿದ್ದಾರೆ.
ಯಾದಗಿರಿ ತಾಲ್ಲೂಕಿನ ಗ್ರಾಮ ಪಂಚಾಯತಗಳಲ್ಲಿ ಬಾಡಿಯಾಳ, ಕಿಲ್ಲನಕೇರಾ, ಮೋಟನ್ನಳ್ಳಿ, ಮುದ್ನಾಳ. ಗುರುಮಠಕಲ್ ತಾಲ್ಲೂಕಿನ ಕಾಕಲ್ವಾರ, ಜೈಗ್ರಾಮ, ಯಲಸತ್ತಿ, ಕಂದಕೂರ. ಶಹಾಪೂರ ತಾಲ್ಲೂಕಿನ ಕಕ್ಕಸಗೇರಾ, ಹೋತಪೇಠ, ಸಗರ, ಉಕ್ಕಿನಾಳ. ವಡಗೇರಾ ತಾಲ್ಲೂಕಿನ ಗುಲಸರಂ, ಉಳ್ಳೆಸೂಗೂರ, ಕಾಡಂಗೇರಾ (ಬಿ), ಹೈಯಾಳ (ಬಿ). ಸುರಪುರ ತಾಲ್ಲೂಕಿನ ವಾಗಣಗೇರಾ, ದೇವತ್ಕಲ್, ಹೆಗ್ಗಣದೊಡ್ಡಿ. ಹುಣಸಗಿ ತಾಲ್ಲೂಕಿನ ಗೆದ್ದಲಮರಿ ಗ್ರಾಮ ಪಂಚಾಯತಗಳಲ್ಲಿ ಅರ್ಜಿ ಆಹ್ವಾನಿಸಿದೆ.
ಗ್ರಾಮ ಒನ್ ಇದು ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸೇವಾಸಿಂಧು ಯೋಜನೆ ಅಡಿಯಲ್ಲಿ ರೂಪಿಸಲಾಗಿದೆ, ಸರ್ಕಾರದ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಈ ಯೋಜನೆ ಅಡಿಯಲ್ಲಿ 750ಕ್ಕೂ ನಾಗರೀಕ ಸೇವೆಗಳನ್ನು ಪಡೆಯಲು ಅರ್ಜಿ ಸ್ವೀಕರಿಸಲಾಗುವುದು, ಅದೇ ರೀತಿ ಸಕಾಲ, ಮಾಹಿತಿ ಹಕ್ಕು ಅಧಿನಿಯಮ, ಬ್ಯಾಂಕಿAಗ್ ಸೇವೆಗಳು ಹಾಗೂ ಸಾರ್ವಜನಿಕರ ಕುಂದುಕೊರತೆ ನಿವಾರಣೆ ಕೋರಿ ಅರ್ಜಿಗಳನ್ನು ಸ್ವೀಕರಿಸಲಾಗುವುದು, ವಾರದ ಎಲ್ಲಾ ಏಳು ದಿನಗಳಲ್ಲಿ ಗ್ರಾಮ ಒನ್ ಕೇಂದ್ರಗಳು ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯ ವರೆಗೆ ಕಾರ್ಯನಿರ್ವಹಿಸಲಿವೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ವೆಬ್‌ಸೈಟ್ kal-mys.gramaone.karnataka.gov.in ನಲ್ಲಿ ಮುಖಾಂತರ 2025ರ ಮಾರ್ಚ್ 15ರ ಒಳಗೆ ಅರ್ಜಿಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ care@blsinternational.net, ಮೊ.ನಂ.9148712473, 0802222 1934ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
