ದಿನಾಂಕ : 25-02-2025 ರಂದು ಯಾದಗಿರಿ ಜಿಲ್ಲೆಯ ಕೆ.ಎಮ್.ಎಮ್. ಪದವಿ ಪೂರ್ವ ಕಾಲೆಜಿನಲ್ಲಿ ನೆಹರು ಯುವ ಕೇಂದ್ರ ಕಲಬುರಗಿ ಮತ್ತು ಶಾಂತಿನಿಕೇತನ ಗ್ರಾಮೀಣ ಅಭಿವೃದ್ದಿ ಸಂಸ್ತೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ
ವಲಯ ಮಟ್ಟದ ಕ್ರಿಡಾಕೂಟ ಮತ್ತು ಪ್ರ ಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಮೊದಲಿಗೆ ಜ್ಯೋತಿ ಬೆಳಗಿಸುವ ಮುಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದ ಶಾಂತಿನಿಕೇತನ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ದಿನೇಶ ಕುಮಾರ್ ರವರು ಮಾತನಾಡುತ್ತಾ ಜೀವನದಲ್ಲಿ ಸೊಲು ಗೆಲವು ಹೇಗೋ ಕ್ರಿಡೆಯಲ್ಲಿ ಸೊಲು ಗೆಲವು ಹಾಗೇ ಸಮಾನವಾಗಿ ಸ್ವಿಕರಿಸಬೇಕು ಕ್ರಿಡೆಯಲ್ಲಿ ಭಾಗವಹಿಸುವುದು ಮುಖ್ಯ ಯುಕರಲ್ಲಿ ಕ್ರಿಡಾ ಮನೊಭಾವ ತುಂಬಾ ಕಡಿಮೆಯಾಗುತ್ತಿದ್ದು ಅದರಲ್ಲು ಪ್ರೌಡ ಶಿಕ್ಷಣ ಮುಗಿಸಿದ ಮೇಲೆ ಕ್ರಿಡಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ಮಕ್ಕಳು ಭಾಗವಹಿಸುತ್ತಿಲ್ಲಾ ಆದರಿಂದ ವಿಶ್ವ ಸಮಾನತೆ ಫೌಂಡೇಶನ್ ಯಾದಗಿರಿ ರವರು ಮಕ್ಕಳಲ್ಲಿ ಕ್ರೀಡಾ ಚಟುವಟಿಕೆಗಳು ಹೆಚ್ಚು ಮಾಡಲು ಮತ್ತು ಮಕ್ಕಳಲ್ಲಿ ಕ್ರೀಡಾ ಆಸಕ್ತಿ ಹೆಚ್ಚು ಮಾಡುವುದಕ್ಕೆ ಈ ರೀತಿಯ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶದಲ್ಲಿ ಆಯೋಜನೆ ಮಾಡಲಾಗುತ್ತಿದೆ ನಮಗೆ ವಿದ್ಯ ಎಷ್ಟು ಮುಖ್ಯವೊ ದೆಹಕ್ಕೆ ಕ್ರಿಡಾ ಚಟುವಟಿಕೆಯು ಅಷ್ಟೆ ಮುಖ್ಯವಾಗಿರುತ್ತದೆ ಈ ದಿನ ನಮ್ಮ ಮಕ್ಕಳ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸುವ, ಆರೋಗ್ಯಕರ ಪೈಪೋಟಿಗಳು ಮತ್ತು ಸ್ನೇಹ ಸಂಬಂಧಗಳನ್ನು ಬೆಳೆಸಲು ಪರಿಷ್ಕೃತವಾದ ಒಂದು ಅವಕಾಶ. ಕ್ರೀಡೆ, ನಮ್ಮ ಚೇತನ ಮತ್ತು ಜಾಗೃತಿಯನ್ನು ತೋರಿಸುತ್ತದೆ, ಮತ್ತು ಇದು ನಮಗೆ ಆಯ್ಕೆ ಮಾಡುವ, ಶುಶ್ರೂಷಿಸುವ ಮತ್ತು ತಮ್ಮ ಕನಸುಗಳನ್ನು ಅನುಸರಿಸಲು ಪ್ರೇರಿಸುತ್ತವೆ.
ನಿಮ್ಮಲ್ಲಿ ಅಂತಹ ಅಸಂಖ್ಯಾತ ಮಕ್ಕಳಲ್ಲಿ ಪ್ರತಿಭೆ ಇರುತ್ತೆ ಅದನ್ನು ಗುರುತಿಸುವ ಜವಬ್ದಾರಿಯು ನಮ್ಮ ಗುರುಗಳಲ್ಲಿ ಇರುತ್ತದೆ ಅಂತಹ ಪ್ರತಿಭೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಹೆಚ್ಚಿನ ತರಬೇತಿಯನ್ನು ನೀಡಿ ತಾಲುಕು ಮಟ್ಟದಿಂದ ಜಿಲ್ಲಾ ಮಟ್ಟ ರಾಜ್ಯ ಮಟ್ಟ ಮತ್ತು ಅಂತರಾಷ್ಟ್ರಿಯ ಮಟ್ಟಕ್ಕೆ ಹೊಗುವದಕ್ಕೆ ಸಹಾಯ ಮಾಡಬೇಕು ಮತ್ತು ಮಕ್ಕಳ ಸಾಧನೆಯಿಂದ ನಮ್ಮ ಗ್ರಾಮ ಶಾಲೆ ಜಿಲ್ಲೆಗು ಹೆಸರು ಬರುತ್ತೆ ಎಂದು ಹೇಳಿದರು .
ನಂತರ ವಿವಿದ ಕ್ರಿಡೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಶಾಂತಿನಿಕೇತನ ಗ್ರಾಮೀಣ ಅಭಿವೃದ್ದಿ ಸಂಸ್ಥೆ(ರಿ) ಯಾದಗಿರಿ ವತಿಯಿಂದ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ್ ಮುಂಡರಗಿ ಪ್ರಾಚರ್ಯರು, ಶ್ರೀ ಎ.ಬಿ.ಪುಜಾರಿ,ಶ್ರೀ ಭೀಮರಾಯ ಅನಪುರ, ಶ್ರೀ ಬೀಮರಾಯ ಆಸನಾಳ್, ಶ್ರೀಮತಿ ಪವಿತ್ರಾ ಶ್ರೀ ಮಾರುತಿ, ವೈದ್ಯಾದಿಕಾರಿಗಳು, ಕುಮಾರಿ ಅಮೃತಾ, ಶ್ರೀ ಮಲ್ಲಿಕಾರ್ಜುನ್,ಕವಿತಾ ಜಾದವ್, ರಾಜೆಶ್ವರಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಕುಮಾರಿ ಮಾರುತಿ ಸ್ವಾಗತಿಸಿದರು ಮಲ್ಲಿಕಾರ್ಜುನೆ ವಂದಿಸಿದರು ಅಮೃತಾ ನೀರುಪಿಸಿದರು,
