ಬೆಂಗಳೂರು,
ರಾಜ್ಯದಾದ್ಯಂತ ಮೆಣಸಿನಕಾಯಿ ಬೆಳೆ ಬೆಳೆದ ರೈತರಿಗೆ ಸೂಕ್ತ ಬೆಲೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಯಚೂರು, ಯಾದಗಿರಿ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ರೈತರು ಮೆಣಸಿನಕಾಯಿಯನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದು, ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಬೆಂಬಲ ಬೆಲೆಯಲ್ಲಿ ಮೆಣಸಿನಕಾಯಿಯನ್ನು ಖರೀದಿಸಲು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಹಾಗೂ ರಾಯಚೂರು ಲೋಕಸಭೆ ಸಂಸದರಾದ ಜಿ ಕುಮಾರ ನಾಯಕ ಅವರು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್ ಅವರೊಂದಿಗೆ ಚರ್ಚಿಸಿದರು.
ಬೆಂಗಳೂರಿನಲ್ಲಿ ಕೃಷಿ ಮಾರುಕಟ್ಟೆ ಸಚಿವರನ್ನು ಭೇಟಿಯಾಗಿ ಮೆಣಸಿನ ಕಾಯಿ ಬೆಂಬಲ ಬೆಲೆ ನಿಗದಿ ಕುರಿತು ಮಾತನಾಡಿದರು.
ರಾಜ್ಯದಾದ್ಯಂತ ರೈತರು
ಮೆಣಸಿನ ಕಾಯಿ ಬೆಳೆಯ ಬೇಸಾಯದ ವೆಚ್ಚ ದುಬಾರಿಯಾಗಿದೆ. ಅಲ್ಲದೆ ಬೆಂಬಲ ಬೆಲೆಯೂ ಸಿಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಕೂಡಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮೆಣಸಿನ ಕಾಯಿ ಬೆಳೆಗೆ ಬೆಂಬಲಬೆಲೆ ನೀಡಬೇಕು’ ಎಂದು ತಿಳಿಸಿದರು.
ಸೋಮವಾರದಂದು ನಾವೆಲ್ಲರು ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮೆಣಸಿನ ಕಾಯಿ ಬೆಳೆ ಬೆಳೆದ ರೈತರು ಎದುರಿಸುತ್ತಿರುವ ಸಂಕಷ್ಠಗಳನ್ನು ಮನವರಿಕೆ ಮಾಡೋಣ ಎಂದು ಸಚಿವ ಬೋಸರಾಜು ಹಾಗೂ ಸಂಸದ ಕುಮಾರ ನಾಯಕರಿಗೆ ಮಾರುಕಟ್ಟೆ ಸಚಿವ ಶಿವಾನಂತ ಪಾಟೀಲ್ ತಿಳಿಸಿದರು.
