ನವದೆಹಲಿ: ಮಹಾ ಕುಂಭ
ಮೇಳದ ಬಗ್ಗೆ ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ – ಕಳೆದ ಒಂದು ತಿಂಗಳಲ್ಲಿ ಉತ್ತರ ಪ್ರದೇಶ ಪೊಲೀಸರು 53 ಸಾಮಾಜಿಕ ಮಾಧ್ಯಮ ಖಾತೆಗಳ • ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ನಕಲಿ ಸುದ್ದಿಗಳನ್ನು ನಿಗ್ರಹಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. – ಹಳೆಯ ವೀಡಿಯೊಗಳು ಸೇರಿದಂತೆ ಅನೇಕ ದಾರಿತಪ್ಪಿಸುವ ಪೋಸ್ಟ್‌ಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ ಎಂದು ಹಿರಿಯ – ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪ ಮಾಹಿತಿ ಹರಡಿದ ಪೋಸ್ಟ್‌ಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಪೊಲೀಸರು ಮತ್ತು ತಜ್ಞ ಸಂಸ್ಥೆಗಳು ನಿರಂತರ ಸೈಬರ್ ಗಸ್ತು ನಡೆಸುವುದನ್ನು ಒಳಗೊಂಡ ಸಮಗ್ರ ಕಾರ್ಯತಂತ್ರವನ್ನು ಇಲಾಖೆ ರೂಪಿಸಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಶಾಂತ್ ಕುಮಾರ್ ಅವರು ಹೇಳಿದ್ದಾರೆ.
ಫೆಬ್ರವರಿ 13 ರಂದು, ಸೈಬರ್ ಮೇಲ್ವಿಚಾರಣೆಯಲ್ಲಿ ಮಹಾ ಕುಂಭ ಮೇಳಕ್ಕೆ ತಪ್ಪಾಗಿ ಲಿಂಕ್ ಮಾಡಲಾದ ಎರಡು ದಾರಿತಪ್ಪಿಸುವ ವಿಡಿಯೋಗಳು ಪತ್ತೆಯಾಗಿವೆ. ಈಜಿಪ್ಟ್ನಲ್ಲಿ ನಡೆದ ಬೆಂಕಿ ಅವಘಡದ ವಿಡಿಯೋವನ್ನು ಮಹಾ ಕುಂಭಬಸ್ ನಿಲ್ದಾಣದಲ್ಲಿ ಬೆಂಕಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದ್ದು, 40-50 ನಾಶವಾಗಿವೆ ಹೇಳಲಾಗಿದೆ. ವಾಹನಗಳು ಎಂದು
ತನಿಖೆಯ ನಂತರ ಈ ದೃಶ್ಯಗಳು ವಾಸ್ತವವಾಗಿ ಕೈರೋದಲ್ಲಿ ಜುಲೈ 14, 2020 ರಂದು ಸಂಭವಿಸಿದ ಅಗ್ನಿ ಅವಘಡದ ದೃಶ್ಯಗಳಾಗಿದ್ದವ ಎಂದು ಅವರು ತಿಳಿಸಿದ್ದಾರೆ.
ಪ್ರಯಾಗರಾಜ್ ಕುಂಭಮೇಳ ಆಡಳಿತ ಮತ್ತು ಉತ್ತರ ಪ್ರದೇಶ ಪೊಲೀಸರು ತಪ್ಪು ಮಾಹಿತಿಯನ್ನು ಹರಡಲು ಕಾರಣರಾದ ಹಲವು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
