ಕಲಬುರಗಿ,22.ಮೇ.25.-ಸೇಡಂ ತಾಲೂಕಿನ ಮೇದಕ ಗ್ರಾಮದ 31 ವರ್ಷದ ಶಂಕ್ರಪ್ಪ ತಂದೆ ಸಣ್ಣ ನರಸಪ್ಪ ಬಿಚ್ಚಾಲ್ ಇವರು ದಿನಾಂಕ: 18-02-2025 ರಂದು ಬೆಳಿಗ್ಗೆ 10.30 ಗಂಟೆಗೆ ಗುಳಿಗೆ (ಮಾತ್ರೆ) ತರಲು ಕಲಬುರಗಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ ಎಂದು ಕಲಬುರಗಿ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಈ ಕುರಿತು ಮುಧೋಳ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 35/2025 ಕಲಂ ರನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಯುವಕನು 5.8 ಅಡಿ ಎತ್ತರ ಇದ್ದು, ಈ ಯುವಕನು ಸ್ವಲ್ಪ ಮಾನಸಿಕ ಅಸ್ವಸ್ಥನಾಗಿದ್ದು, ಕೋಲು ಮುಖ, ಸಾಧಾರಣ ಗೋಧಿ ಬಣ್ಣ, ಸಾಧಾರಣ ತಳ್ಳನೆಯ ಮೈಕಟ್ಟು, ಉದ್ದು ಮೂಗು, ಅಗಲವಾದ ಹಣೆ, ಸಾಧಾರಣ ಕಪ್ಪು ಕೂದಲು ಇದ್ದು, ಕನ್ನಡ ಮತ್ತು ತೆಲಗು ಭಾಷೆಯನ್ನು ಮಾತನಾಡುತ್ತಾರೆ. ಬೂದು ಬಣ್ಣದ ಉದ್ದನೆಯ ತೋಳಿನ ಅಂಗಿ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಈತನ ಸುಳಿವು ಸಿಕ್ಕಲ್ಲಿ ಕೂಡಲೇ ಮುಧೋಳ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08441-220811, ಚಿಂಚೋಳಿ ಪೊಲೀಸ್ ಉಪಾಧ್ಯಕ್ಷರ ದೂರವಾಣಿ ಸಂಖ್ಯೆ 08475-273100, ಪೊಲೀಸ್ ಇನ್ಸ್ಪೆಕ್ಟರ್ ಇವರ ಮೊಬೈಲ್ ಸಂಖ್ಯೆ 9480803594 ಹಾಗೂ ಕಲಬುರಗಿ ಪೊಲೀಸ್ ಕಂಟ್ರೂಲ್ ರೂಮ್ ಸಂಖ್ಯೆ 9480803500 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
