March 13, 2025 2:24 pm

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ಆರೋಗ್ಯ » ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯವು ಆತನು ನಿರ್ವಹಿಸುವ ಕೆಲಸ ಕಾರ್ಯಗಳ ಮೇಲೆ ಅವಲಂಬನೆಯಾಗಿರುತ್ತದೆ

ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯವು ಆತನು ನಿರ್ವಹಿಸುವ ಕೆಲಸ ಕಾರ್ಯಗಳ ಮೇಲೆ ಅವಲಂಬನೆಯಾಗಿರುತ್ತದೆ

ಯಾದಗಿರಿ : ಫೆಬ್ರವರಿ 27 : ಮಾನಸಿಕ ಆರೋಗ್ಯವೆಂಬುದು ನಮ್ಮ ಭಾವನೆಗಳ ಅಭಿವ್ಯಕ್ತಿಯಾಗಿದ್ದು, ಬೇಡಿಕೆಗಳ ವ್ಯಾಪ್ತಿಗೆ ಯಶಸ್ವಿಯಾಗಿ ಹೊಂದಿಕೊಳ್ಳುವುದಾಗಿರುತ್ತದೆ. ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯವು ಆತನು ನಿರ್ವಹಿಸುವ ಕೆಲಸ ಕಾರ್ಯಗಳ ಮೇಲೆ ಅವಲಂಬನೆಯಾಗಿರುತ್ತದೆ ಎಂದು ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಮರಿಯಪ್ಪ ಅವರು ಹೇಳಿದರು.

     ಯಾದಗಿರಿ ನಗರದ ಶ್ರೀ ಶಕ್ತಿ ಭವನದಲ್ಲಿ ಇತ್ತಿಚೀನ ನಡೆದ 2025ರ ಫೆಬ್ರವರಿ 25ರ ರಂದು ಬೆಂಗಳೂರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ಯಾದಗಿರಿ ಶಿಶು ಅಭಿವೃದ್ಧಿ ಇಲಾಖೆಯದಿಂದ ಮಕ್ಕಳಿಗಾಗಿ ಮಕ್ಕಳ ಸ್ನೇಹಿ ಕಾನೂನು ಸೇವೆಗಳು ಮತ್ತು ಮಾನಸಿಕ ಅಸ್ವಸ್ಥ ಹಾಗೂ ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಗಳಿಗೆ ಇರುವ ಕಾನೂನು ಸೇವೆಗಳ ಬಗ್ಗೆ ಐSU-ಅ, ಐSU-ಒ ಸಮಿತಿ ಸದಸ್ಯರುಗಳಿಗೆ, ಪ್ಯಾನಲ್ ವಕೀಲರಿಗೆ ಹಾಗೂ ಸ್ವಯಂ ಸೇವಕರಿಗೆ, ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

     ಮಾನಸಿಕ ಆರೋಗ್ಯವೆಂಬುದು ನಮ್ಮ ಭಾವನೆಗಳ ಅಭಿವ್ಯಕ್ತಿಯಾಗಿದ್ದು, ಬೇಡಿಕೆಗಳ ವ್ಯಾಪ್ತಿಗೆ ಯಶಸ್ವಿಯಾಗಿ ಹೊಂದಿಕೊಳ್ಳುವುದಾಗಿರುತ್ತದೆ. ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯವು ಆತನು ನಿರ್ವಹಿಸುವ ಕೆಲಸ ಕಾರ್ಯಗಳ ಮೇಲೆ ಅವಲಂಬನೆಯಾಗಿರುತ್ತದೆ. ವಿಪರೀತ ಒತ್ತಡಗಳ ಸಂದAಭದಲ್ಲಿ ಮನುಷ್ಯನ ಮಾನಸಿಕ ಚಿತ್ತವು ಹಾಳಾಗುವ ಸಾಧ್ಯತೆ ಇರುತ್ತದೆ. ಮಾನಸಿಕ ಆರೋಗ್ಯಕರ ಸ್ಥಿತಿಯನ್ನು ಸಾಮಾನ್ಯವಾಗಿ ಸಕಾರಾತ್ಮಕ ಶಿಕ್ಷಣದ ರೂಪದಲ್ಲಿ ನೋಡಲಾಗುತ್ತದೆ. ವ್ಯಕ್ತಿಯು ಗುರುತಿಸಬಲ್ಲ ಯಾವುದೇ ಮಾನಸಿಕ ಆರೋಗ್ಯ ಸ್ಥಿತಿಯನ್ನು ಹೊಂದಿರದಿದ್ದರೂ ಕೂಡ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕಾಗಿರುವುದು ಅತೀ ಮುಖ್ಯವಾಗಿರುತ್ತದೆ. ಸಂಪೂರ್ಣ ಸೃಜನಾತ್ಮಕ ಜೀವನ ನಡೆಸುವ ಸಾಮರ್ಥ ಹಾಗೂ ಜೀವನದ ಅನಿವಾರ್ಯ ಸವಾಲುಗಳೊಂದಿಗೆ ವ್ಯವಹರಿಸುವ ವ್ಯವದಾನವನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ಎಲ್ಲರೂ ಒಂದಿಲ್ಲಲೊAದು ಬಗೆಯಲ್ಲಿ ಮಾನಸಿಕ ಗೊಂದಲವನು ವನ್ನು ಅನುಭವಿಸಬೇಕಾಗಿ ಬರುತ್ತದೆ. ಅದನ್ನು ಮೆಟ್ಟಿ ನಿಲ್ಲುವುದರ ಮೂಲಕ ಒತ್ತಡ ಜೀವನದಿಂದ ಹೊರಬರಬೇಕಾಗಿದೆ ಎಂದು ತಿಳಿಸಿದರು.

     ಯಾದಗಿರಿ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಮನೋವೈದ್ಯರು ಡಾ.ಅಮೀತ್ ಕುಮಾರ ಕಾಳಗಿ ಅವರು ಮಾತನಾಡಿ, ಮಾನಸಿಕ ಕಾಯಿಲೆಯ ಲಕ್ಷಣಗಳ ಬಗ್ಗೆ ಮಾತನಾಡಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 100 ಕ್ಕೆ 10% ಜನರು ಅಲ್ಪಮಟ್ಟದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಖಿನ್ನತೆ, ಆತಂಕ, ಮನೋಗೀಳು ರೋಗ, ಮನೋದೈಹಿಕ ಬೇನೆಗಳು, ವ್ಯಕ್ತಿತ್ವ ದೋಷಗಳು 100 ಕ್ಕೆ 1% ಜನರು ತೀವ್ರತರದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ ಚಿತ್ತವಿಕಲತೆ ಸ್ವೀಜೋಫ್ರೆನಿಯಾ, ಬೈಪೋಲಾರ್. ಮನೋವಿಕಲತೆ ಮರುವಿನ ರೋಗ ಮತ್ತು ಮಾದಕ ವಸ್ತುಗಳ ವ್ಯಸನಗಳ ಪರಿಣಾಮವಾಗಿ ಬರುವಂತಹ ಮಾನಸಿಕ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿದರು.

     ಚಿಕಿತ್ಸಾ ಮನೋಶಾಸ್ತç ತಜ್ಞರು ಮಲ್ಲಿಕಾರ್ಜುನ ಮ್ಯಾಗೇರಿ ಅವರು ಮಾತನಾಡಿ, ಒಬ್ಬ ವ್ಯಕ್ತಿವು ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆಯಲ್ಲಿ ಜೀವಿಸಬೇಕಾದರೆ ದೈಹಿಕ ಆರೋಗ್ಯ ಹೇಗೆ ಮುಖ್ಯವೋ ಅದೇ ರೀತಿ ಮಾನಸಿಕ ಆರೋಗ್ಯವೂ ಕೂಡ ಅಷ್ಟೆ ಪ್ರಾಮುಖ್ಯವಾಗಿದೆ. ಆದ್ದರಿಂದ ಮಾನಸಿಕ ಗೊಂದಲಗಳ ಪರಿಹಾರಕ್ಕಾಗಿ 14416 ಶುಲ್ಕ ರಹಿತ ದೊರವಾಣಿ ಸಂಖ್ಯೆಗೆ ಟೇಲಿ ಮಾನಸ್‌ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.

     ಮಾನಸಿಕ ಆರೋಗ್ಯ ಶಿಕ್ಷಣದ ಸಂಯೋಜಕರಾದ ಶರಣಪ್ಪ ಸಿ.ಅಮರಪುರ ಅವರು ಮಾತನಾಡಿದರು, ಮಕ್ಕಳ ಹಕ್ಕುಗಳ ಕಾರ್ಯಕರ್ತರು ಯಾದಗಿರಿ ಮಾತನಾಡಿ ಮಕ್ಕಳಿಗಿರುವ ಹಕ್ಕುಗಳ ಬಗ್ಗೆ ಮತ್ತು ಮಕ್ಕಳ ಕಾನೂನು ಕುರಿತು ವಿವರವಾಗಿ ಮಾತನಾಡಿದರು. ಅಲ್ಲದೇ, ಮಕ್ಕಳ ನ್ಯಾಯ ಮಕ್ಕಳ ಘೋಷಣೆ ಮತ್ತು ರಕ್ಷಣೆ ಕಾಯ್ದೆ 2018, ಬಾಲ್ಯ ವಿವಾಹ ನಿಷೇಧ ಕಾಯ್ದೆ 2006, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕರ್ನಾಟಕ ತಿದ್ದುಪಡಿ ಕಾಯ್ದೆ 2016, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ 2012, ಮಕ್ಕಳು ಮತ್ತು ಕಿಶೋರ ಕಾರ್ಮಿಕ ಪದ್ಧತಿ, ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986, ಅನೈತಿಕ ಮಾನವ ಕಳ್ಳ ಸಾಗಣಿಗೆ ತಡೆ ಕಾಯ್ದೆ 1956, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಾಯ್ದೆ 2005ರ ಬಗ್ಗೆ ವಿವರಿಸಿ ತಿಳಿಸಿದರು.

     ಮಕ್ಕಳ ಹಕ್ಕುಗಳ ಒಡಂಬಡಿಕೆಯು 1989 ನವಂಬರ್ 20ರಂದು ವಿಶ್ವ ಸಂಸ್ಥೆ ಜಾರಿಗೆ ತಂದಿದ್ದು ಬಗ್ಗೆ ತಿಳಿಸಿ ತಿಳಿಸಿದರು, ನಮ್ಮ ಭಾರತ ದೇಶವು 1992 ಡಿಸೆಂಬರ್ 11 ರಂದು ಸಹಿ ಮಾಡಿದೆ ಎಂದು ಹೇಳಿದರು. ನಂತರ ಮಕ್ಕಳ ಹಕ್ಕುಗಳ ಒಡಂಬಡಿಕೆಯ 54 ಪರಿಚ್ಛೇದಗಳನ್ನು ವಿವರಿಸಿದರು. ಹಾಗೂ ಒಂದರಿAದ 40 ರವರೆಗೆ ಪರೀಕ್ಷೆಗಳು ಮಕ್ಕಳಿಗೆ ನೇರವಾಗಿ ಸಂಬAಧ ಪಡುತ್ತವೆ ಮತ್ತು 41 ರಿಂದ 54 ಪರೀಕ್ಷೆಗಳು ಆಡಳಿತಾತ್ಮಕವಾಗಿ ಮಕ್ಕಳ ಹಕ್ಕುಗಳು ಉಲ್ಲಂಘನೆ ಅದಲ್ಲಿ ಪರಿಹಾರ ಕಂಡುಕೊಳ್ಳುವುದು ಮತ್ತು ವಿಶ್ವಸಂಸ್ಥೆಗೆ ವರದಿಯನ್ನು ಸಲ್ಲಿಸುವುದು ತಿಳಿಸುತ್ತವೆ ಎಂದರು. ಮಕ್ಕಳ ಹಕ್ಕುಗಳ ಪರಿಚ್ಛೇದಗಳನ್ನು ಸರಳಿಕರಣ ಮಾಡಿ ನಾಲ್ಕು ಪ್ರಮುಖ ಹಕ್ಕುಗಳ ಗುಂಪುಗಳನ್ನಾಗಿ ಮಾಡಲಾಗಿದೆ ಅವುಗಳು ಬದುಕುವ ಹಕ್ಕು, ರಕ್ಷಣೆಯ ಹಕ್ಕು, ವಿಕಾಸ ಹೊಂದುವ ಹಕ್ಕು, ಭಾಗವಹಿಸುವ ಹಕ್ಕು ಈ ನಾಲ್ಕು ಪ್ರಮುಖ ಹಕ್ಕುಗಳ ಬಗ್ಗೆ ವಿವರಿಸಿ, ನಮ್ಮ ಭಾರತ ಸರ್ಕಾರವು ಮಕ್ಕಳ ರಕ್ಷಣೆಗಾಗಿ, ಮತ್ತು ಪೋಷಣೆಗಾಗಿ 15 ಮಕ್ಕಳ ಕಾನೂನು ಕಾಯ್ದೆಗಳನ್ನು ಜಾರಿ ಮಾಡಿದೆ ಎಂದು ತಿಳಿಸಿದರು.

     ಈ ಸಂದರ್ಭದಲ್ಲಿ ಪ್ಯಾನೇಲ್ ವಕೀಲರು ಕಾನೂನು ಸ್ವಯಂ ಸೇವಕರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price